ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಮೈಸೂರು ಮಮತೆಯ ಮರೆಯದಿರು
ಮದ್ರಾಸು ಬಿಸಿಲ ನೆನೆಯದಿರು
ತೆರೆದಿಡು ನೆನಪುಗಳ ಕಂತೆ
ಕಟ್ಟದಿರು ಚಿಂತೆಗಳ ಸಂತೆ
ಸದಾ ನಗುತಿರು ಎಲ್ಲರಂತೆ
ನಿನ್ನತನಕ್ಕೆ ಕುಂದುಬರದಂತೆ
ದ್ವಂದ್ವಗಳಿಗಿರಲಿ ಪೂರ್ಣ ವಿರಾಮ
ನೋವುಗಳಿಗಿರಲಿ ಅರ್ಧ ವಿರಾಮ
ಭಾವನೆಗಳಿಗಿರಲಿ ಅಲ್ಪ ವಿರಾಮ
ಸಂತೋಷಕ್ಕಿರದಿರಲಿ ವಿರಾಮ
ಸದಾ ನಗುತ್ತಿರು
ಸದಾ ನಲಿಯುತ್ತಿರು
ಅಗಾಗ ನೆನೆಯುತ್ತಿರು
ನೆನೆದಾಗ ಬರೆಯುತ್ತಿರು!
chennagide
ಪ್ರತ್ಯುತ್ತರಅಳಿಸಿsuper :-)
ಪ್ರತ್ಯುತ್ತರಅಳಿಸಿThank you!!!
ಪ್ರತ್ಯುತ್ತರಅಳಿಸಿ